ಬರೆದೆ ನೀನು ನನ್ನ ಹೆಸರ
ಸೀತಾಬರೆದೆ ನೀನು ನನ್ನ ಹೆಸರ ನನ್ನ ಬಾಳ ಪುಟದಲಿ
ಬಂದು ನಿಂತೆ ಹೇಗೋ ಏನೋ ನನ್ನ ಮನದ ಗುಡಿಯಲಿ || ಪ ||
ಮಿಡಿದೆ ನೀನು ಪ್ರಣಯ ನಾದ ಹೃದಯವೀಣೆ ಅದರಲಿ
ಬೆರೆತು ಹೋದೆ ಮರೆತು ನಿಂದೆ ಅದರ ಮಧುರ ಸ್ವರದಲಿ || ೧ ||
ಕಂಗಳಲ್ಲೇ ಕವನ ಬರೆದು ಕಳಿಸಿದೆ ನೀ ಇಲ್ಲಿಗೆ
ಅಂಗಳದಿ ಅರಳಿತಾಗ ನನ್ನ ಒಲವ ಮಲ್ಲಿಗೆ || ೨ ||
ನಿನ್ನ ನಗೆಯ ಬಲೆಯ ಬೀಸಿ ಹಿಡಿದೆ ನನ್ನ ಜಾಲದಿ
ಬಂಧಿಸಿದೆ ನನ್ನನಿಂದು ನಿನ್ನ ಪ್ರೇಮ ಪಾಶದೆ || ೩ ||
ಸೀತಾ
ಚಿತ್ರ ನೋಡಿ